'ಸಿಂಧು ಭೈರವಿ' ಕರ್ನಾಟಕ ಸಂಗೀತ ಹಾಗೂ ಹಿಂದೂಸ್ಥಾನಿ ಸಂಗೀತ ಎರಡು ಪ್ರಕಾರಗಳಲ್ಲೂ ಉಪಯೋಗದಲ್ಲಿರುವ ರಾಗ. ಭೈರವಿ ಥಾಟ್ ಗೆ ಸೇರಿದೆ. ಇದು ಒಂದು ಬೆಳಗಿನ ರಾಗವಾಗಿದೆ. ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಹತ್ತನೆಯ ಮೇಳಕರ್ತ ರಾಗವಾದ ನಾಟಕಪ್ರಿಯ ರಾಗದ ಜನ್ಯ ರಾಗವಾಗಿದೆ.